ROLE OF MEDIA IN PROMOTING SPORTS



Gopalkrishna G. Hegde
Associate Editor
Prajavani, Bangalore.




Mr. Suresh Kalmadi, the organising committee chairman of the 10th Commonwealth Games held at New Delhi 15 months ago continues to cool his heels in Tihar Jail. Of course he has the company of some bureaucrats also in the jail. The Commonwealth Games were a grand success as far as the sports was concerned. The Indian athletes won as many as 100 medals which was a great record in the history of the nation's sport. But the Games were marred by the financials scandals. Few athletes tested positive in the anti dope tests. But the financial irregularities by the organising committee exposed the corrupt practices which has been spread like cancer in the sports federations and associations.

I do not like to start my today's subject with Mr. Suresh Kalmadi or the negative aspects of the sports. With my experience of more than three decades in the field of sports journalism i am convinced that the politics and sports are the both sides of a same coin. If Kalmadi is behind bars it is because the media brought to light the irregularities of the CWG. Nothing was in order till the CWG started. Thanks to media again the preparations for the CWG were taken up on a war foot and the events were held as per the schedule.

Today the media is in a 'love and hate' situation in the minds of the people. Just think what whould have happened without the media in this world. With all the negative approach or actions by some sections of the media, it has been proved on and again that the 'Pen is mightier than the sword'. Of course the media has played a great role in promoting sports and sports persons.

I would like to present a wonderful example here. I would be very happy if somebody here knows about Mr. Benu Balu Bhaat of Gadag. He must be around 80 now and still going strong with his hockey stick. His love for hockey was amazing. He was an extra ordinary player for the railways. He could have represented India in the 1964 Olympic Games if he had given seven thousand rupees to some officials. He had no money and he could not pay. And he missed the chance to play for the country. But he never regretted for that. He just enjoyed the game.

After his retirement he had to support his family of ten children. He worked as a watchman in a petrol bunk. But his love for hockey had not diminished a bit. His hand itched when he saw boys playing hockey. He volunteered himself to coach them. He belonged to the Settlement area and the Britisher's gift to the Settlers was hockey. One day my good friend Munna Guledgudda, a cricket lover, coach (he was instrumental in the growth of Sunil Joshi who became a test cricketer) introduced me to Benu Balu Bhaat. He narrated his hockey story wearing the Indian Railways team blazer. He expressed his intension to coach the youngsters even in that old age.

I was just waiting for an opportunity to help him. I had written a detailed article about him in Prajavani and Deccan Herald. When the state cabinet meeting was held in Gadag, I forced the then sports minister Mr. S.S. Mallikarjun and Mr. A J Anandan, Director of Youth Services and Sports to meet Benu Balu Bhaat. Both were very much impressed by his achievements. The minister immediately agreed to appoint him as a coach at the Gadag stadium to coach the youngsters. It was really a great triumh for me and the media. I just felt so happy that my reports helped a sportsman.

There are so many examples like this. The media have always highlighted sporting achievements in a great fashion. Apart from the live coverage of the matches, the media focused on the life stories of the sportsmen and women. Many of our sportsmen and women have come from a very poor background. Sports showed them the way of life. They came to sports hoping to get a job. The media reports helped them in this regard.

Any sportsman or woman needs to climb the ladder to reach the highest level. There is no shortcut for success in sports. Though there is politics, nepotism, corruption in the selection process no body can stop the genuinely talented athlete. Here the media plays a very important role. The media always keeps an eye on the selectors and other office bearers of the federation or association. Though there are few golmals nobody can get away with utter nonsense. What all did not happen during CWG but thanks to the culprits were finally booked and the enquiry is going on.

The media does the job of spotting the talent and encouraging the same to develop. Today the cricket is so popular all over the country thanks to print and electronic media. But at the same time cricket is blamed for the downfall of other sports in the country. It is not the case as it is generally visualised. That is a seperate story and subject which is not relevent here. But i can tell you with authority that media has played a very important role in the promotion of sports in our country.

A sports reporter is a complete journalist. He covers every aspect of a sportsman. He writes about the personality of the athlete, his growth into the sports field, his economic status, his positive personal lifelike marriage, children, his social activities and finally the obituary when the sportsman dies. The true stories of the champions are always a great motivation to the youngsters. Media kindles the light of hope in the mind of all youngsters who aspire to become successful sports persons.

Here i have to tell you about the importance of the physical education teachers in promoting sports in coordination with the media. There was a time when the PE teachers were considered as friends, philosophers and guides by those who aspired to excel in sports. Be a tiny school or the biggest educational institution in town, the relationship between sport-loving students and the PT masters was unique in several respects.

If these teachers were solely responsible for the boys and girls spending their evenings from Monday to Friday in a most purposeful fashion, then the seniors would look after the needs of the boys and girls during the weekend. They taught them not only the finer aspect of chosen games but aslo explained them the value of discipline, dedication and most other adorable qualities that go to make the aspirants 'complete human beings'.

Unfortunately, sport, thereby the physical education, has been pushed to the back seat as parents and many an educational institution chose to concentrate more on studies in an effort to produce academically brilliant men and women. This 'all studies no sport' situation is being condemned by sociologists and sensible thinkers of the society. Yet things have not moved in the desired direction as far as sport-lovers and sports-promoters are concerned.

Yet it is heartening to note that several universities in our country are still producing physical education teachers through some well-conceived programmes. Here one must appreciate those young men and women who join this course so as to serve the society in a telling manner. One of the items in the well-conceived programme is sports journalism. Just imagine a physical education teacher who possesses a huge list of promising young talents in various disciplines of sport in his/her school/college. How will he project these talents through the media? Sport Journalism, as a subject, would certainly help him/her.

Once he/she complete the physical education course wilth journalism as one of the subjects, he/she wouild be working in a school or college with greater confidence. The PE teacher can thake classes regularly and highlight the importance of sporting acitivities for the professional college students. He can narrate the great stories of the sports heroes in Olympics, Asian Games and world cup events. Only the Champions will motivate the younger generation. But unfortunately the PE teachers have been reduced to whistle blowers. It is time for them to change now.

The well equipped PE teacher will be in a commendable position of preparing reports of his students (sports) and the institution and release them as exaustive press releases. He can write profiles on boys and girls who excel at various levels. These writing excercises do help the aspirants and their educational institutions as the media will only be delighted to make the most of these well-furnished details with suitable photographs.

Here the PE students and their teachers must understand the situation that prevails in media. Gone are the days when newspapers insisted their sports reporters to concentrate on sports acitivities in schools and colleges. Now sports reporters, in general , want to turn global overnight. Activities happening in and around them are left to the 'desk man' and the press releases. If a press release is brief, it will, naturally, get only a brief mention in the newspaper. If it contains more details that too prepared with professional zeal, the desk man gets impressed. To attain this, PE students must be well versed in sports journalism. To get things done in our and our ward's favour, we must understand the needs, style and scope of the media. Hence, it is time sports journalism gets into the halls where the nuances of Physical Education are being taught. Let's prepare our future PE Masters through a fool-proof system. No social activity is complete without well-equipped PE teachers.

A PROUD AND PASSIONATE SCRIBE

Rajan Bala and I became good friends on our first meeting itself. That was in Jan 1967 during the India-West Indies cricket Test match in Chennai. It was certainly not a tale of ‘love at first sight’ between two cub reporters. I can, however, say that there was mutual admiration during that first week of our friendship and it lasted for 42 long years without a spell of misunderstanding.

In 2009 we both thought that our friendship might as well celebrate golden jubilee. Rajan said, “Oh. Eight more years! If it happens, we must celebrate it in a grand manner. Hope one us do not get run out.” And he passed away in September perhaps with the idea of celebration looming large on his mental screen.

After that 1967 meeting, Rajan and I used to meet only once in a blue moon depending on our respective assignments. After all, he was based in Kolkata and me in Chennai. But the erratic frequency of our meetings did not keep our minds away. In 1973 I joined The Hindu Bangalore, and, in 1976-77 Rajan joined The Hindu Chennai. That brought us closer.

When Rajan joined Deccan Herald Bangalore in 1980, we started meeting each other on a daily basis. The period 1980-84 saw the best moments of our friendship. Then Rajan left for Chennai (Indian Express) and then to Mumbai (Indian Express) and so our meeting too became rare. But the mutual admiration and affection did not diminish.

Rajan was back in Bangalore in 1998-99 once and for all. He always loved Bangalore. And God was kind enough to see that Rajan breathed his last in this city! Rajan loved Bangalore mainly because the Bangalore Sports journalists reserved a soft corner for him.

During our one-to-one meetings, Rajan used to become emotional whenever we spoke about Bangalore and its sports journalists. “No one loves me as honestly and instinctively as them.” Perhaps Rajan, who has worked in as many Indian cities as possible, would not have found a set of friends as affectionate and considerate as his friends in his favourite city.

While Bangalore sports scribes saw the “MAN” in Rajan Bala, most others might have seen only the “journalist” in Rajan Bala. That must be the reason for Rajan’s love for Bangalore. Rajan often used to recall the “remarkable gesture” shown by the Bangalore sports journalists in 1980. Before he could complete his first year with Deccan Herald the SWAB made him its president. That was mainly because of the fact that Rajan was heading the “largest” sports department in the state.

Rajan enjoyed that ‘decoration’ as there was little or no opposition to that choice. SWAB, no doubt, had better and more popular personalities to be its president. But then SWAB members were matured enough to appreciate the status of Rajan, the sports editor of Karnataka’s prestigious newspaper. Rajan remained grateful to SWAB throughout.

When he settled down in Bangalore in late 1990s Rajan strengthened his relationship with SWAB and its members. Rajan, a journalist with a wonderful work-culture, will ever be remembered as one of the finest cricket writers Indian has ever produced. He was so passionate when it comes to cricket and cricketers. There is indeed a child in all adult male and female. I had often seen the ‘child’ in Rajan Bala. That child made me admire Rajan more than anything else.

-P.R. VISWANATHAN

"ಸಿಟಿಜನ್ ಜರ್ನಲಿಸ್ಟ್"

"ಸಿಟಿಜನ್ ಜರ್ನಲಿಸ್ಟ್" ಎನ್ನುವ ಪದವೇ "ನಿಮ್ಮೊಳಗೂ ಒಬ್ಬ ಪತ್ರಕರ್ತನಿದ್ದಾನೆ" ಎಂದು ಪ್ರತಿಯೊಬ್ಬರಿಗೂ ತಿಲಿಸುವಂಥ ವಿಶೇಷವಾದ ಒಳ ಅರ್ಥವನ್ನು ಹೊಂದಿದೆ. ಎಲ್ಲರೂ ಪತ್ರಕರ್ತರಾಗಬಹುದು. ಆದರೆ ಪರಿಣತಿಯ ಅಂತರ ಇರಬಹುದು. ವೃತ್ತಿಪರ ಹಾಗೂ ನಾಗರಿಕ ಪತ್ರಕರ್ತರ ನಡುವೆ ಇರುವ ಅಂತರ ಮಾತ್ರ ಇಷ್ಟೇ ಆಗಿರುತ್ತದೆ. ಆದರೆ ನಾಗರಿಕ ಪತ್ರಕರ್ತರೂ ವೃತ್ತಿಪರರಂತೆ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಲು ಖಂಡಿತ ಸಾಧ್ಯ ಅಂಥದೊಂದು ಸಾಧ್ಯತೆಗೆ ಅವಕಾಶ ಮಾಸಿಕೊತ್ತಿದ್ದೆ "ಸಿಟಿಜನ್ ಜರ್ನಲಿಸಂ" ಅಥವಾ "ಸಿಟಿಜನ್ ಜರ್ನಲಿಸ್ಟ್" ಎನ್ನುವ ಪರಿಕಲ್ಪನೆ.

"ಸಿಟಿಜನ್ ಜರ್ನಲಿಸ್ಟ್" ಎನ್ನುವ ಕಲ್ಪನೆ ಭಾರತೀಯ ಮಾಧ್ಯಮಕ್ಕೆ ಪರಿಚಯವಾಗಿ, ಅದರಲ್ಲಿ ಜನರೂ ತೊಡಗಿಕೊಂಡಿದ್ದು ಕಳೆದ ಒಂದೆರಡು ವರ್ಷಗಳಲ್ಲಿ. ಹೀಗಾಗುವುದಕ್ಕೆ ಕಾರಣ ದೃಶ್ಯಮಾಧ್ಯಮಗಳು ಹೆಚ್ಚು ಕ್ರಿಯಾಶೀಲವಾಗಿದ್ದು. ಆದರೆ ಆರ್ಥರ್ ಸಿ ಕ್ಲಾರ್ಕ್ ಹೇಳುವಂತೆ ಹ್ಯಾಮ್ ರೇಡಿಯೋ ಬಳಕೆದಾರ, ಅಂತರಜಾಲದಲ್ಲಿ ಅಭಿಪ್ರಾಯ ಹರಿಬಿಡುವ ಬ್ಲಾಗರ್, ಹಾಗೂ ಇಂದಿನ ಸಮೂಹ ಮಾಧ್ಯಮದ ಜೊತೆ ತಂತ್ರಜ್ಞಾನದ ಅರಿವಿನೊಂದಿಗೆ ಸಂಪರ್ಕ ಹೊಂದುವ ಪ್ರತಿಯೊಬ್ಬನೂ ಸಿಟಿಜನ್ ಜರ್ನಲಿಸ್ಟ್.

ಬ್ಲಾಗರ್, ಮೊಬೈಲ್ ಬಳಕೆದಾರ ಒಂದು ಘಟನೆಯನ್ನು ದಾಖಲಿಸಿ ಅದಕ್ಕೆ ಪ್ರತಿಯಾಗಿ ಅಭಿಪ್ರಾಯಗಳು ಹುಟ್ಟುವಂತೆ ಮಾಡಬಲ್ಲವನಾಗಿದ್ದಾನೆ ಎನ್ನುತ್ತಾರೆ ಆರ್ಥರ್ ಸಿ ಕ್ಲಾರ್ಕ್. ಇತ್ತೀಚೆಗೆ ನಿಧನರಾದ ಆರ್ಥರ್ ಸಿ ಕ್ಲಾರ್ಕ್ ಖ್ಯಾತ ಲೇಖಕ, ಕಾದಂಬರಿಕಾರ. ಇವರು ಬರೆದ ವಿಜ್ಞಾನದ ಕಥೆಗಳು ಕೇವಲ ಕಲ್ಪನೆಯಷ್ಟೇ ಆಗದೆ ಅವರ ಕಣ್ಣಮುಂದೆ ಸಾಕಾರವಾದಂಥವು.

ಸಂಪರ್ಕ ಹಾಗೂ ಸಮೂಹ ಮಾಧ್ಯಮ ಕ್ಷೇತ್ರ ಕುರಿತು ಒಬ್ಬ ವಿಜ್ಞಾನಿಗಿಂತ ಹೆಚ್ಚಾಗಿ ಕನಸು ಕಂಡವರು ಆರ್ಥರ್ ಸಿ ಕ್ಲಾರ್ಕ್. ಅದು ಸಾಕಾರವಾಗಿದ್ದನ್ನು ಕಣ್ಣಾರೆ ಕಂಡವರು. ಮಾಧ್ಯಮ ಕ್ಷೇತ್ರದ ಏಳುಬೀಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಆರ್ಥರ್ ಸಿ ಕ್ಲಾರ್ಕ್ ನಾಲ್ಕು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ಸಿಟಿಜನ್ ಜರ್ನಲಿಸ್ಟ್ ಕುರಿತು ಸುದೀರ್ಘ ಲೇಖನವನ್ನು ಬರೆದಿದ್ದರು. ಆ ಲೇಖನವು ಸಿಟಿಜನ್ ಜರ್ನಲಿಸ್ಟ್ ಎಂದರೇನು ಎನ್ನುವುದನ್ನು ತಿಳಿಸುತ್ತದೆ.

2004ರಲ್ಲಿ ಏಷ್ಯಾದಲ್ಲಿ ಆದ ಸುನಾಮಿ ವಿಶ್ವವನ್ನೇ ನಡುಗಿಸಿತು ಎಂದೇ ಬಣ್ಣಿಸಲಾಯಿತು. ಈ ಘಟನೆ ನಡೆದ ಸ್ಥಳಕ್ಕೆ ಸ್ವಲ್ಪ ಹತ್ತಿರದಲ್ಲೇ- ಶ್ರೀಲಂಕಾದಲ್ಲಿ- ನೆಲೆಸಿದ್ದ ಕೆಲವರು ಮಹತ್ವದ ಘಟನೆಗೆ ಸಾಕ್ಷಿಯಾದರು. ರಜೆ ದಿನದ ಸಂಭ್ರಮದಲ್ಲಿದ್ದ ನೂರಾರು ಮಂದಿ ಭೀಕರ ಸುನಾಮಿ ಅಲೆಗಳ ದೃಶ್ಯಗಳನ್ನು ತಮ್ಮ ಹ್ಯಾಂಡಿಕ್ಯಾಮ್‌ನಲ್ಲಿ ಸೆರೆಹಿಡಿದರು. ಅಲ್ಲಿದ್ದವರೆಲ್ಲಾ ದುರದೃಷ್ಟವಶಾತ್ ಒಂದು ಕೆಟ್ಟ ಗಳಿಗೆಯಲ್ಲಿ ಕೆಟ್ಟ ಸ್ಥಳದಲ್ಲಿದ್ದರು. ಆದರೂ ಅವರು ತಮ್ಮ ಕ್ಯಾಮೆರಾ ಎಚ್ಚರವಾಗಿಟ್ಟಿದ್ದರು. ಟಿವಿ ಚಾನೆಲ್‌ನವರು, ವರದಿಗಾರರು ಬರುವ ಹೊತ್ತಿಗೆ ತಡವಾಗಿತ್ತು. ಅವರು ಭೀಕರ ಅಲೆಗಳನ್ನು ಪ್ರತ್ಯಕ್ಷ ಕಂಡು ಸೆರೆಹಿಡಿದವರಿಂದ ಬೇಡಿ ಪಡೆದು ತಮ್ಮ ಟಿವಿಗಳಲ್ಲಿ ಪ್ರಸಾರ ಮಾಡಬೇಕಾಯಿತು. ಈ ಒಂದು ಘಟನೆ ಸಿಟಿಜನ್ ಜರ್ನಲಿಸ್ಟ್ ಮಹತ್ವ ಏನೆಂದು ಸ್ಪಷ್ಟವಾಗಿ ವಿವರಿಸುತ್ತದೆ.

ಸಂವಹನಕ್ಕೆ ತೀವ್ರವಾಗಿ ತುಡಿಯುವ ಪ್ರಭೇದ ನಮ್ಮದು. ಅದೂ ತಾಂತ್ರಿಕವಾಗಿ ಸಾಧ್ಯವಾಗುವುದಾದರೆ ಮತ್ತಷ್ಟು ಬೇಗ ಅದನ್ನು ಸ್ವೀಕರಿಸುತ್ತೇವೆ, ನಮ್ಮದನ್ನಾಗಿಸಿಕೊಳ್ಳುತ್ತೇವೆ. ಆರ್ಥಿಕ, ಕಾನೂನು ಮತ್ತು ರಾಜಕೀಯಗಳಷ್ಟೇ ಇದಕ್ಕೆ ಮಿತಿಗಳಾಗಬಹುದು. ಕಾಲಾನಂತರದಲ್ಲಿ ಅವೂ ಕೂಡ ತೊಡಕಾಗುವುದಿಲ್ಲ. ಆದರೆ ನಮ್ಮ ನೈತಿಕತೆ ಮಾತ್ರ ನಮ್ಮ ಮುಂದೆ ಇದ್ದೇ ಇರುತ್ತದೆ. ಭವಿಷ್ಯದ ಸಂಪೂರ್ಣ ಸಂಪರ್ಕವುಳ್ಳ ಜಗತ್ತನ್ನು ರೂಪಿಸುವುದು ನಮ್ಮ ಕೈಗಳಲ್ಲೇ ಇದೆ ಎನ್ನುವುದನ್ನು ಮಾತ್ರ ಸಿಟಿಜನ್ ಜರ್ನಲಿಸ್ಟ್ ಮರೆಯಬಾರದು.

ನಾವೀಗ ಇರುವುದು ಮಾಧ್ಯಮ ಜಗತ್ತಿನಲ್ಲಿ. ಜಗತ್ತಿನ ಎಲ್ಲ ಪತ್ರಿಕೆಗಳು, ಸುದ್ದಿ ರವಾನಿಸುವ ಅಲೆಗಳು ಸ್ತಬ್ಧವಾಗಿಬಿಟ್ಟರೆ, ನಮ್ಮ ಜಗತ್ತು ಕೂಡ ಸ್ತಬ್ಧ. ಹಾಗಾಗಿ ಸಶಕ್ತ ಸಮಾಜಕ್ಕೆ ಸದಾ ಮಾಹಿತಿ ನೀಡಲು ವಿವಿಧ ರೀತಿಯ ಮಾಧ್ಯಮಗಳು ಬೇಕು. ಅಮೆರಿಕದ ಲೇಖಕ ಎ.ಜೆ. ಲೀಬ್ಲಿಂಗ್ ಹೇಳುತ್ತಾನೆ, ‘ಪತ್ರಿಕಾ ಸ್ವಾತಂತ್ರ್ಯ ಅನ್ನೋದು ಪತ್ರಿಕೆಯನ್ನು ಹೊಂದಿರುವವರದ್ದಾಗಿರುತ್ತದೆ’ ಎಂದು. ಈ ಮಾತಿನಲ್ಲಿ ಅರ್ಥವಿದೆ.

ಇತ್ತೀಚಿನವರೆಗೆ ಇದ್ದ ಪರಿಸ್ಥಿತಿ ಇದು. ಆದರೆ ಅಂತರ್ಜಾಲ ಈಗ ಪ್ರತಿಯೊಬ್ಬರ ಕಂಪ್ಯೂಟರನ್ನು ಒಂದು ಪ್ರಿಂಟಿಂಗ್ ಪ್ರೆಸ್, ಪ್ರಸಾರಕೇಂದ್ರವನ್ನಾಗಿ ಮಾಡಿದೆ. ನಾವೀಗ ಸಂಪರ್ಕ ಮಾಧ್ಯಮದ ಎರಡನೇ ಯುಗಕ್ಕೆ ಕಾಲಿಡುತ್ತಿದ್ದೇವೆ. ಬ್ಲಾಗ್‌ಗಳು, ವಿಕಿಪೀಡಿಯಾ ಮತ್ತು ಸಿಟಿಜನ್ ಜರ್ನಲಿಸ್ಟ್‌ಗಳು ಮುಂಬರುವ ಹೊಸತನದ ಸಂಕೇತಗಳು.

ಬ್ಲಾಗ್ ಬರಹಗಾರರು ಆನ್‌ಲೈನ್‌ನಲ್ಲಿ ತಮ್ಮ ಡೈರಿ ಬರೆಯುವ ಮೂಲಕ ತಮ್ಮ ವೃತ್ತಿ ಮತ್ತು ಸಮಾಜಿಕ ಪರಿಧಿಯಿಂದಾಚೆಗೂ ಪ್ರಭಾವಿಯಾಗಬಲ್ಲರು. ಕೊಲಂಬಿಯಾ ಬಾಹ್ಯಾಕಾಶ ನೌಕೆ ದುರಂತಕ್ಕೀಡಾದಾಗ ಅಸಂಬದ್ಧ ಪತ್ರಿಕಾ ವರದಿಗಳನ್ನು ಖಂಡತುಂಡವಾಗಿ ಟೀಕಿಸಿದ್ದು ಬಾಹ್ಯಾಕಾಶದ ಬಗ್ಗೆ ತಿಳಿದಿದ್ದ ಅನುಭವಿ ಬ್ಲಾಗ್ ಬರಹಗಾರರು ಎನ್ನುವುದನ್ನು ಮರೆಯುವಂತಿಲ್ಲ.

ಸಿಟಿಜನ್ ಜರ್ನಲಿಸಂ ಅನ್ನೋ ಪರಿಕಲ್ಪನೆಯನ್ನು ಶೇನ್ ಬೌಮನ್ ಮತ್ತು ಕ್ರಿಸ್ ವಿಲ್ಲೀಸ್ ಹೀಗೆ ವ್ಯಾಖ್ಯಾನಿಸುತ್ತಾರೆ: ‘ಮಾಹಿತಿ ಸಂಗ್ರಹಿಸುವ, ವರದಿ ಮಾಡುವ, ವಿಶ್ಲೇಷಿಸುವ ಮತ್ತು ಸುದ್ದಿ, ಮಾಹಿತಿಯ ಪ್ರಸಾರದಲ್ಲಿ ಕ್ರಿಯಾಶೀಲ ತೊಡಗುವಿಕೆ’ ಎಂದು.

ಸಿಟಿಜನ್ ಜರ್ನಲಿಸಂ ಉದ್ದೇಶ ಪ್ರಜಾಪ್ರಭುತ್ವ ನಿರೀಕ್ಷಿಸುವಂತೆ ಸ್ವತಂತ್ರ, ವಿಶ್ವಾಸಾರ್ಹ, ನಿಖರ, ಸವಿವರ, ಸಾಂದರ್ಭಿಕ ಮಾಹಿತಿಯನ್ನು ಪೂರೈಸುವುದು. ಇದನ್ನು ನಾವು ಮಾಧ್ಯಮದ ಮುಖ್ಯವಾಹಿನಿಯಿಂದಲೂ ನಿರೀಕ್ಷಿಸುತ್ತೇವೆ. ಸಿಬಿಎಸ್‌ ನ್ಯೂಸ್‌ನಲ್ಲಿ ನಿರೂಪಕನಾಗಿರುವ ವಾಲ್ಟರ್ ಕ್ರಾನ್‌ಕೈಟ್ ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ಮಾಧ್ಯಮ ಒತ್ತಡವನ್ನು ಎದುರಿಸುತ್ತಿದೆ. ಇಂದು ಸಂಪಾದಕೀಯ ಬಳಗದ ಏಕತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ. ಕಾರ್ಪೋರೇಟ್ ಸೆನ್ಸಾರ್ ಸರ್ಕಾರಿ ಸೆನ್ಸಾರ್ ನಷ್ಟೇ ಅಪಾಯಕಾರಿ. ಹಾಗೆ ಸ್ವಯಂ ಹೇರಿಕೆಯ ಸೆನ್ಸಾರ್ ವಂಚನೆ ಎನ್ನುತ್ತಾನೆ ಮಾಧ್ಯಮ ನಿರೂಪಕ ಕ್ರಾನ್‌ ಕೈಟ್.

ಸಿಟಿಜನ್ ಜರ್ನಲಿಸ್ಟ್‌ಗಳು ಪೂರ್ವಾಗ್ರಹ ಪೀಡಿತರಾಗಿರುವುದಿಲ್ಲ ಎನ್ನುವ ಹಾಗಿಲ್ಲ. ಆದರೆ ಅಸಂಖ್ಯ ಮಂದಿ ಏಕಕಾಲಕ್ಕೆ ಭಾಗಿಯಾಗಿರುವ ವಿಕಿಪೀಡಿಯಾ ಸ್ವಯಂ ತಿದ್ದಿಕೊಳ್ಳುವುದಕ್ಕೆ ಸಾಧ್ಯವಿರುವುದನ್ನು ಸಾಬೀತು ಮಾಡಿದೆ. ಆರಂಭದಲ್ಲಿ ವಿಕಿಪೀಡಿಯಾ "ಆನ್ ಎನ್‌ ಸೈಕ್ಲೋಪಿಡೀಯಾ"ವನ್ನು ಇಂಟರ್ನೆಟ್ ಬಳಕೆದಾರರ ಮಾಹಿತಿಯಿಂದಲೇ ರೂಪಿಸಲಾಯಿತು. ಇದು ಅರೆಸತ್ಯ, ಸುಳ್ಳು ಮಾಹಿತಿಗಳನ್ನು ಹೊಂದಿರುವ ಭಯವಿತ್ತು. ಆದರೆ ಅಧ್ಯಯನಗಳು ಹೇಳುತ್ತವೆ, ಅಂಥ ಯಾವುದೇ ಮಾಹಿತಿಯೂ ಅತಿ ಶೀಘ್ರದಲ್ಲೇ ತಿದ್ದುಪಡಿಯಾಗುತ್ತದೆ ಮತ್ತು ಅಪ್‌-ಡೇಟ್ ಕೂಡ ಆಗುತ್ತದೆ!

ಹಾಗಂತ ಸಿಟಿಜನ್ ಜರ್ನಲಿಸ್ಟ್ ಕಠಿಣವಾದ ಮಾಧ್ಯಮ ಸ್ಪರ್ಧೆಯಲ್ಲಿ ಬದುಕುತ್ತಾನಾ? ಈ ಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ. ಹೊಸ ಬದಲಾವಣೆ ಮಾಧ್ಯಮದ ಬಳಕೆದಾರನ ಶಕ್ತಿಯನ್ನು ಉಪೇಕ್ಷಿಸುವಂತಿಲ್ಲ.

ಸಿಟಿಜನ್ ಜರ್ನಲಿಸಮ್‌ಗೆ ಇದೊಂದು ಉತ್ತಮ ಉದಾಹರಣೆ: ಕಮರ್ಷಿಯಲ್ ದೃಷ್ಟಿಯಲ್ಲೂ ಯಶಸ್ಸು ಕಂಡ ಮತ್ತು ಉತ್ತಮ ಸಿಟಿಜನ್ ಜರ್ನಲಿಸಂ ಎಂದು ಗುರುತಿಸಿಕೊಂಡಿದ್ದು ದಕ್ಷಿಣ ಕೊರಿಯಾದ www.ohmynews.com; 2001 ರಲ್ಲಿ "ಓಹ್ ಯೊನ್ ಹೊ" ಎಂಬ ಪತ್ರಕರ್ತ ಅಂತರ್ಜಾಲ ಪತ್ರಿಕೆ ಆರಂಭಿಸಿದ. ಪ್ರತಿಯೊಬ್ಬ ಪ್ರಜೆಯೂ ಪತ್ರಕರ್ತ ಎಂಬುದು ಆತನ ನಿಲುವು.

ಹಾಗಾಗಿ ಆತ ಯಾರು ಬೇಕಾದರೂ ವರದಿ ಮಾಡಬಹುದು ಎಂಬ ಆಹ್ವಾನ ಕೊಟ್ಟ. ಇಂದು ಸಾವಿರಾರು ಮಂದಿ ಈ ವೆಬ್‌ಸೈಟಿಗೆ ಸುದ್ದಿ ಬರೆದು ಕಳಿಸುತ್ತಾರೆ. ಪ್ರತಿದಿನ 7.5 ಲಕ್ಷ ಮಂದಿ ಈ ವೆಬ್‌ಸೈಟಿಗೆ ಭೇಟಿಕೊಡುತ್ತಾರೆ. ಈಗ ಓಹ್‌ಮೈನ್ಯೂಸ್ ವೆಬ್‌ಸೈಟಿನಲ್ಲಿ ಕೇವಲ ೪೦ ಮಂದಿ ಸಿಬ್ಬಂದಿ ಇದ್ದು, ಅವರು ಬರೆಯುವ ಸುದ್ದಿ ವೆಬ್‌ಸೈಟಿನಲ್ಲಿ ಪ್ರಕಟವಾದ ಸುದ್ದಿಗಳ ಐದನೇ ಒಂದು ಭಾಗ ಮಾತ್ರ! ಉಳಿದಿದ್ದು ನಾಗರಿಕರು ಕಳಿಸಿದ್ದು.

ದಕ್ಷಿಣ ಕೊರಿಯ ಅಧ್ಯಕ್ಷ ರೊಹ್ ಮೂ ಹ್ಯೂನ್ ಆಯ್ಕೆಯಲ್ಲಿ ಈ ವೆಬ್‌ಸೈಟ್ ಮಹತ್ವದ ಪಾತ್ರ ವಹಿಸಿತ್ತು. ಚುನಾವಣೆ ನಂತರ ಹ್ಯೂನ್ ಮೊದಲು ಸಂದರ್ಶನ ನೀಡಿದ್ದು ಯಾವುದೇ ಪತ್ರಿಕೆಗಲ್ಲ. ಸಿಟಿಜನ್ ಜರ್ನಲಿಸ್ಟ್‌ಗಳಿಂದ ನಡೆಯುತ್ತಿರುವ "ಓಹ್ ಮೈನ್ಯೂಸ್ ವೆಬ್‌ಸೈಟಿಗೆ! ಇದೇ ವ್ಯಕ್ತಿ ಆರೋಪ ಹೊತ್ತು ನಿಂತಾಗ ನಡೆದ ಪ್ರತಿಭಟನೆಗಳನ್ನು ವಿಸ್ತೃತವಾಗಿ, ಸಚಿತ್ರ ಹಾಗೂ ವಿಡಿಯೋಗಳೊಂದಿಗೆ ವರದಿ ಮಾಡಿದ ಹೆಗ್ಗಳಿಕೆ ಸಿಟಿಜನ್ ಜರ್ನಲಿಸ್ಟ್‌ಗಳದ್ದು.

ನಿಷ್ಕ್ರಿಯವಾದ ಮಾಧ್ಯಮದ ಯುಗ ಅಂತ್ಯದತ್ತ ಸಾಗುತ್ತಿದೆ. ಸಿಜಿಟನ್ ಕೇನ್ ನಿಂದ ಸಿಟಿಜನ್ ಜರ್ನಲಿಸ್ಟ್‌ನತ್ತ ಹೊರಟ ಈ ದಾರಿಯಲ್ಲಿ ಹಿಂತಿರುಗುವ ಮಾತಿಲ್ಲ. ಆದ್ದರಿಂದ ಸಿಟಿಜನ್ ಜರ್ನಲಿಸಂ ಹೊಸ ಯುಗದ "ಮಾಧ್ಯಮ ಶಕ್ತಿ" ಎನ್ನುವುದು ನನ್ನ ಅಭಿಪ್ರಾಯ.

-ಎಂ. ಎ. ಪೊನ್ನಪ್ಪ

`ಪತ್ರಿಕಾ ದಿನ'...ಮೊಗ್ಲಿಂಗ್ ಸ್ಮರಣೆ

ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ `ಪತ್ರಿಕಾ ದಿನ' ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮದ ಸ್ಥಿತಿಗತಿಗಳ ಕುರಿತು ಈ ದಿನ ಚರ್ಚೆ ನಡೆಯುವುದು ಕೂಡ ಅಷ್ಟೇ ಸಹಜ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗಾಗಬೇಕು ಅದೇ ಇಂಥದೊಂದು ದಿನವನ್ನು ಆಚರಿಸುವ ವಿಶೇಷ. ಜನ ಸಾಮಾನ್ಯರ ಒಳಿತಿಗೆ ನಿರಂತರ ದುಡಿಯುವ ಪತ್ರಕರ್ತರ ಬೆನ್ನು ಚಪ್ಪರಿಸಬೇಕೆನ್ನುವುದು ಈ ದಿನಾಚರಣೆಯ ಸದುದ್ದೇಶ.

ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ತರ ಪಾತ್ರ ವಹಿಸಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ ಹಾಗೂ ಪರಿಚಯಿಸಿಕೊಟ್ಟಿದೆ. ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು. ಜರ್ಮನಿಯ ಜಾನ್ ಗುಟೆನ್ ಬರ್ಗ್ 1440ರಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ, ಪವಿತ್ರ ಗ್ರಂಥ `ದಿ ಬೈಬಲ್' ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಮುದ್ರಣ ಜ್ಞಾನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ ಹಲವೇ ಸಾಧನೆಗಳಲ್ಲಿ ಮುದ್ರಣಯಂತ್ರ ಸಹ ಒಂದು ಎಂದು ಆಧುನಿಕ ಇತಿಹಾಸಕಾರರು ಒಪ್ಪಿಕೊಂಡಿದ್ದಾರೆ.

ಯೇಸುಕ್ರಿಸ್ತನ ಸಂದೇಶಗಳನ್ನು ಜಗತ್ತಿಗೆ ತಿಳಿಸಬೇಕೆಂಬ ಹಂಬಲದಿಂದ ಯುರೋಪಿನಲ್ಲಿ ಹಲವು ಧರ್ಮಪ್ರಸಾರ ಸಂಸ್ಥೆಗಳು ಹುಟ್ಟಿಕೊಂಡವು. ಜರ್ಮನಿ-ಪ್ರಾನ್ಸ್ ದೇಶಗಳ ಗಡಿಗೆ ಹೊಂದಿಕೊಂಡಿರುವ ಪುಟ್ಟ ಪಟ್ಟಣವಾದ ಬಾಸೆಲ್ ನಲ್ಲಿ ಅಂದಿನ ಜನ ಯುರೋಪಿನಲ್ಲಿನ ಯುದ್ಧಗಳಿಂದ ಬೇಸತ್ತಿದ್ದರು. ದೇವರ ಸೇವೆ ಮಾಡಿದರೆ ಶಾಂತಿ ನೆಲಸಬಹುದೆಂಬ ಸದುದ್ದೇಶದಿಂದ ಆರು ಜನ ಪ್ರಮುಖರು ಕಟ್ಟಿದ ಧರ್ಮಪ್ರಸಾರ ಸಂಸ್ಥೆ ಮುಂದೆ ಬಾಸೆಲ್ ಮಿಷನ್ ಎಂದು ಹೆಸರಾಯಿತು.

ಸ್ಯಾಮುಯಲ್ ಹೆಬಿಕ್ ಸೇರಿದಂತೆ ಮೂವರು 1834ರಲ್ಲಿ ಕಲ್ಲಿಕೋಟಿ ತಲುಪಿದರು. ನಂತರ ಮಂಗಳೂರಿಗೆ ಪಯಣಿಸಿದರು. ಬ್ರಿಟಿಷರ ಆಡಳಿತಕ್ಕೆ ಭಾರತ ಒಳಪಟ್ಟಿದ್ದರಿಂದ, ಬಾಸೆಲ್ ಧರ್ಮಪ್ರಚಾರ ಸಂಸ್ಥೆ ವಿಶೇಷ ಅನುಮತಿಯನ್ನು ಪಡೆದು, ತಮ್ಮ ಕಾರ್ಯಚಟವಟಿಕೆಗಳನ್ನು ಆರಂಭಿಸಿದರು. 168 ವರ್ಷಗಳ ಇತಿಹಾಸದ ಈ ಮಹಾನ್ ಸಂಸ್ಥೆ ಕನ್ನಡಿಗರಿಗೆ ಮೊದಲ ಸಲ ಮುದ್ರಣ ಕಲೆ ಪರಿಚಯಿಸಿತು. ಭಾರತದ ಮೊದಲ ಪತ್ರಿಕೆ 1780ರಲ್ಲೇ ಆರಂಭಿವಾಗಿತ್ತು. ಕಲ್ಕತ್ತಾ ನಗರದಲ್ಲಿ ಅದು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿತ್ತು.

ಧರ್ಮ ಪ್ರಸಾರದ ಜತೆಗೆ ಅನೇಕ ಉಪಯುಕ್ತವಾದ ಶೈಕ್ಷಣಿಕ ಹಾಗೂ ಕೈಗಾರಿಕಾ ತರಬೇತಿಗಳನ್ನು ಈ ಸಂಸ್ಥೆ ಆರಂಭಿಸಿತು. 1843ರಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿ ನಿಖರವಾದ ಸುದ್ದಿಯನ್ನು ಜನತೆಗೆ ನೀಡಬೇಕೆಂದು ನಿರ್ಧರಿಸಿತು. ಅಂಚೆ ಸೌಲಭ್ಯ ಬಿಟ್ಟರೆ, ಉಳಿದ ಯಾವ ಬಗೆಯ ಸಂಪರ್ಕ ಸಾಧನಗಳಿರಲಿಲ್ಲ. ಗಾಳಿ ಸುದ್ದಿಗೆ ಹೆಚ್ಚಿನ ಪ್ರಧಾನವಿತ್ತು. ಈ ಮಹತ್ಕಾರ್ಯದ ರೂವಾರಿ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್. ಕನ್ನಡ ಪತ್ರಿಕೋದ್ಯಮದ ಮೂಲಪುರುಷ.

"ಕಿಟಕಿಯಿರದ ಬಿಡಾರದಲ್ಲಿರುವ ಜನರಿಗೆ ಪತ್ರಿಕೆಗಳ ಮೂಲಕ ನಾಲ್ಕು ದಿಕ್ಕಿಗೆ ಬೆಳಕು ಬಿರುವ ಹಾಗೆ" ಸಮಾಚಾರ ನಿಡುವ ಪಾಕ್ಷಿಕ ಪ್ರಕಟಣೆಯಾದ "ಮಂಗಳೂರು ಸಮಾಚಾರ" 1843 ಜುಲೈ 1ರಂದು ಹೊರಡಿಸುವ ಐತಿಹಾಸಿಕ ನಿರ್ಧಾರ ಕೈಗೊಂಡನು. ಈ ಪತ್ರಿಕೆ ಕನ್ನಡ ಪತ್ರಿಕಾ ಲೋಕಕ್ಕೆ ಮುನ್ನುಡಿ ಬರೆಯಿತು. ಈ ಮಹತ್ತರ ಕೊಡುಗೆಯ ಮೂಲಕ ಹರ್ಮನ ಪೆಡ್ರಿಕ್ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕನಾದ. ಮೊಗ್ಲಿಂಗ್ ಮತಾಂತರಕ್ಕೆ ಮಹತ್ವ ನೀಡದೆ, ಜನಸಮೂಹದ ಬೌದ್ದಿಕ ಸುಧಾರಣೆಗೆ ಒತ್ತು ನೀಡಿದ ಮೇಧಾವಿ.

ಮೊಗ್ಲಿಂಗ್ ಹುಬ್ಬಳ್ಳಿ ಹಾಗೂ ಗದಗದಲ್ಲಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದ. ಆಗ ಆ ಭಾಗವು ಧಾರವಾಡ ಜಿಲ್ಲೆಗೆ ಸೇರಿತ್ತು. ಮೊಗ್ಲಿಂಗ್ ಧಾರವಾಡ ಜಿಲ್ಲೆಯಿಂದ ಮಂಗಳೂರಿಗೆ ಬಂದು 1838ರಿಂದ 1852ರವರೆಗೆ ಸೇವೆಸಲ್ಲಿಸಿದ. ಈ ಅವಧಿಯಲ್ಲಿ ಆತ ಕೈಗೊಂಡ ಪ್ರಮುಖ ನಿರ್ಧಾರವೆಂದರೆ ಪತ್ರಿಕೆಯೊಂದನ್ನು ಪ್ರಕಟಿಸಿ, ಜನರಿಗೆ ಮಾಹಿತಿ ಒದಗಿಸುವುದು. 1843ರ ಜುಲೈ 1ರಂದು "ಮಂಗಳೂರು ಸಮಾಚಾರ" ಎಂಬ ಒಂದು ದುಡ್ಡಿನ ನಾಲ್ಕು ಪುಟಗಳ ಕಲ್ಲಚ್ಚಿನ ಪತ್ರಿಕೆಯನ್ನು ಹೊರತಂದ. ಅಂಚೆ ಹಾಗೂ ನೇರ ಮಾರಾಟಕ್ಕೆ ಸಹ ಲಬ್ಯವಿದ್ದ ಈ ಪತ್ರಿಕೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ವತ್ತಮಾನಗಳನ್ನು ಬಹು ಎಚ್ಚರಿಕೆಯಿಂದ ವರ್ಗೀಕರಿಸಿ ಪ್ರಕಟಿಸುತ್ತಿತ್ತು.

ಮೊಗ್ಲಿಂಗ್ ನ ಪತ್ರಿಕಾವೃತ್ತಿಯ ಬಹು ಮಹತ್ವದ ಅಂಶವೆಂದರೆ, ಧರ್ಮಪ್ರಚಾರ ಸಂಸ್ಥೆಯಿಂದ ಹೊರಡಿಸಲ್ಪಟ್ಟ ಪತ್ರಿಕೆಯಾದರೂ, "ಮಂಗಳೂರು ಸಮಾಚಾರ" ಎಲ್ಲ ಬಗೆಯ ವರ್ತಮಾನಗಳನ್ನು ಪ್ರಕಟಿಸುತ್ತಿತ್ತು. ಓದುಗರ ಕೂತುಹಲವನ್ನ ಅರಿತಿದ್ದ ಮೊಗ್ಲಿಂಗ್, ವತ್ತಮಾನಗಳನ್ನು ಬಹು ಎಚ್ಚರಿಕೆಯಿಂದ ಆಯ್ದು, ಭಾಷಾಂತರಿಸಿ ಸರಳ ಕನ್ನಡದಲ್ಲಿ ಪ್ರಕಟಿಸುತ್ತಿದ್ದ. ಇದೊಂದು ಸ್ವತಂತ್ರ ವಾರ್ತಾ ಪತ್ರಿಕೆ ಎನ್ನುವ ರೂಪುರೇಷೆ ಹೊಂದಿತ್ತು ಎಂಬುದು ವಿಶೇಷ. ಇಂಗ್ಲಿಷರ ಆಳ್ವಿಕೆಯ ಆ ಮಹತ್ವದ ದಿನಗಳಲ್ಲಿ ಬಹುತೇಕ ರಾಜಸಂಸ್ಥಾನಗಳು ನಾಶವಾಗಿ, ಕಂಪನಿ ಆಡಳಿತ ವಿಸ್ತಾರವಾಗುತ್ತಿದ್ದ ಕಾಲವದು. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕಿರು ಪರಿಚಯಗಳನ್ನು ಈ ಪತ್ರಿಕೆ ಮಾಡುತ್ತಿತ್ತು. ಈ ಪ್ರಕಟಣೆಗೆ ಕನ್ನಡ ಭಾಷಿಕರಿಂದ ಬಂದ ಪ್ರತಿಕ್ರಿಯೆಯನ್ನು ಗಮನಿಸಿದ, ಮೊಗ್ಲಿಂಗ್ ಇದು "ಮಂಗಳೂರು ಸಮಾಚಾರ"ದ ಬದಲಾಗಿ "ಕನ್ನಡ ಸಮಾಚಾರ" ವಾದರೆ ತುಂಬ ಅರ್ಥಪೂರ್ಣವಾಗುತ್ತದೆ ಎಂದು ನಿಶ್ಚಯಿಸಿದ. ಕನ್ನಡ ಭಾಷಿಕರು ವಿಶಾಲವಾದ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂಬ ಅಂಶವನ್ನ ಆತ ಗಮನಿಸಿ ಪತ್ರಿಕೆಯ ಕ್ಷೇತ್ರ ವ್ಯಾಪ್ತಿ ವಿಸ್ತಾರವಾಗಬೇಕೆಂಬ ಕನಸು ಕಂಡ.

ಪತ್ರಕೆಯೊಂದರ ಮೂಲಕ ಎಲ್ಲ ಕನ್ನಡ ಭಾಷಿಕರನ್ನು ತಲುಪುವ ಹೆಬ್ಬಯಕೆ ಆತನದಾಗಿತ್ತು. ಸುಮಾರು ಎಂಟು ತಿಂಗಳು ಮಂಗಳೂರಿನಲ್ಲಿ ಪ್ರಕಟವಾದ ಈ ಪತ್ರ್ರಿಕೆ ಬಳ್ಳಾರಿಗೆ ಮಾರ್ಚ್ 1844ರಲ್ಲಿ ವರ್ಗಾವಣೆಗೊಂಡಿತು. ನಂತರ "ಕನ್ನಡ ಸಮಾಚಾರ"ವೆಂದು ಪುನರನಾಮಕರಣಕಗೊಂಡಿತು. ಬಳ್ಳಾರಿಯಲ್ಲಿ ಸುಮಾರು ಹತ್ತು ತಿಂಗಳ ಕಾಲ ಈ ಪತ್ರಿಕೆ ಪ್ರಕಟವಾಯಿತು. ಮೊಗ್ಲಿಂಗ್ ನಷ್ಟು ಕ್ರೀಯಾಶಾಲಿ ಸಮಾಚಾರ ಸಂಗ್ರಹಕಾರರು ಬಳ್ಳಾರಿಯಲ್ಲಿ ಲಭ್ಯವಾಗಲಿಲ್ಲ. ಮಂಗಳೂರಿನಲ್ಲಿದ್ದುಕೊಂಡು ಬಳ್ಳಾರಿಯಲ್ಲಿ ಪತ್ರಿಕೆ ನಡೆಸುವ ಆತನ ಸಾಹಸ ಯಶಸ್ವಿಯಾಗಲಿಲ್ಲ.

ಸಿಪಾಯಿ ದಂಗೆಯ ಬೆಳವಣಿಗೆಗಳನ್ನು ಜನತೆಗೆ ಮುಟ್ಟಿಸಬೇಕೆನ್ನುವ ಆಕಾಂಕ್ಷೆಯಿಂದ 13 ವರ್ಷಗಳ ನಂತರ "ಕಂನಡ ವಾರ್ತಿಕ" (ಕೆನರೀಸ್ ಮೆಸೆಂಜರ್) ಪತ್ರಿಕೆಯನ್ನು ಮೊಗ್ಲಿಂಗ್ ಆರಂಭಿಸಿದ. ಎರಕದಲ್ಲಿ ಹೊಯ್ದ ಅಚ್ಚು ಮೊಳೆಗಳನ್ನು ಮೊದಲ ಬಾರಿಗೆ ಈ ಪತ್ರಿಕೆ ಅಳವಡಿಸಿಕೊಂಡಿತ್ತು.

1836ರಿಂದ 1861ರವರೆಗೆ ಮೊಗ್ಲಿಂಗ್ ಪತ್ರಕರ್ತನಾಗಿ, ಸಾಹಿತಿಯಾಗಿ, ಶಿಕ್ಷಕನಾಗಿ, ಅನುವಾದಕನಾಗಿ, ಗಾದೆಗಳ ಸಂಗ್ರಹಕಾರನಾಗಿ ಅಮೋಘವಾದ ಸೇವೆ ಸಲ್ಲಿಸಿದ. ಆತನು ಕನ್ನಡ ಪತ್ರಿಕಾ ಕ್ಷೇತ್ರಕ್ಕೆ ಹಾಕಿಕೊಟ್ಟ ಬುನಾದಿ ಗಟ್ಟಿಯಾದದ್ದು. ಮಂಗಳೂರು, ಗದಗ, ಹುಬ್ಬಳ್ಳಿ ಮತ್ತು ಮಡಿಕೇರಿ ಆತನ ಪ್ರಮುಖ ಕಾರ್ಯಕ್ಷೇತ್ರಗಳಾಗಿದ್ದವು. ಹಲವೇ ತಿಂಗಳುಗಳ ಕಾಲ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ಚತುರತೆಯನ್ನ ಮೊಗ್ಲಿಂಗ್ ಸಾಬೀತುಪಡಿಸಿ, ಕನ್ನಡ ಪತ್ರಿಕೋದ್ಯಮ ಬೆಳವಣಿಗೆಗೆ ತಳಪಾಯ ಹಾಕಿದ. ತಾನು ಬದುಕಿದ್ದ 70 ವರ್ಷಗಳ ಅವಧಿಯಲ್ಲಿ ಸುಮಾರು 25 ವರ್ಷಗಳ ಕಾಲ ಕನ್ನಡನಾಡಿನಲ್ಲಿ ಆತ ಸಲ್ಲಿಸಿದ ಸೇವೆ ಗುರುತರವಾದದ್ದು. ಪತ್ರಿಕಾ ದಿನಾಚರಣೆಯಂದು ಮೊಗ್ಲಿಂಗ್ ಸ್ಮರಣೆ ಮಾಡದಿದ್ದರೆ ಇಂಥದೊಂದು ದಿನಾಚರಣೆ ಆಚರಿಸಿದ್ದು ಅರ್ಥಪೂರ್ಣ ಎನಿಸುವುದಿಲ್ಲ. ಆದ್ದರಿಂದ ನಾನು ಮೊಗ್ಲಿಂಗ್ ಅವರ ಕಿರುಪರಿಚಯವನ್ನು ತಮ್ಮ ಮುಂದೆ ಇಟ್ಟಿದ್ದೇನೆ.

ಕಳೆದ 168 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ವೈವಿಧ್ಯಮಯವಾಗಿ ಬೆಳೆದಿದೆ. ಕನ್ನಡ ಪತ್ರಿಕೆಗಳ ಒಟ್ಟು ಪ್ರಸಾರ 30 ಲಕ್ಷಕ್ಕೆ ಏರಿದೆ. ಕನ್ನಡ ಭಾಷಿಕರ ಸಂಖ್ಯೆಗೆ ಹೋಲಿಸಿದರೆ ಇದು ಸಮಾಧಾನಕರವಲ್ಲ. ನೆರೆಯ ಕೇರಳದಲ್ಲಿ ಮಲೆಯಾಳ ಮನೋರಾಮ ದಿನಪತ್ರಿಕೆಯ ಪ್ರಸಾರ 17 ಲಕ್ಷ ಮೀರಿದೆ. ಅಲ್ಲಿ 10 ಲಕ್ಷಕ್ಕಿಂತ ಹೆಚ್ಚು ಮಾರಾಟವಾಗುವ ಮಾತೃಭೂಮಿ ಎನ್ನುವ ಇನ್ನೊಂದು ಪತ್ರಿಕೆಯಿದೆ. ತೆಲಗಿನ ಈ ನಾಡು ಪತ್ರಿಕೆ ಪ್ರತಿನಿತ್ಯ 23 ಲಕ್ಷ ಪ್ರತಿಗಳನ್ನು ಛಾಪಿಸುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೆಗಳ ಪ್ರಸಾರ ವ್ಯಾಪಕವಾಗಬೇಕಾಗಿದೆ. ಬನ್ನಿ ಪ್ರತಿ ಕನ್ನಡಿಗರ ಮನೆಯಲ್ಲಿಯೂ ಪತ್ರಿಕೆಗಳು ರಾರಾಜಿಸಲಿ. ಜ್ಞಾನ-ಮನರಂಜನೆ ವೈವಿಧ್ಯಮಯವಾಗಿ ಪತ್ರಿಕೆಗಳ ಮೂಲಕ ಲಭ್ಯವಾಗಲಿ ಎಂದು ಆಶಿಸುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.
ಎಲ್ಲರಿಗೂ ನಮಸ್ಕಾರ, ಕನ್ನಡ ಪತ್ರಿಕಾ ಕ್ಷೇತ್ರ ಚಿರಾಯುವಾಗಲಿ.

-ಎಂ.ಎ.ಪೊನ್ನಪ್ಪ

ಸ್ವ್ಯಾಬ್ ಬೆಳವಣಿಗೆಗೆ ಶ್ರಮಿಸಿದ ಗೋಪಾಲ ಹೆಗಡೆ

ನೇರ ಹಾಗೂ ದಿಟ್ಟ ಮಾತಿನ ಶ್ರೀ. ಗೋಪಾಲ ಹೆಗಡೆ ಅವರು ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಬೆಳವಣಿಗೆಯಲ್ಲಿ ಶ್ರಮಿಸಿದ ಮಹನೀಯರಲ್ಲಿ ಒಬ್ಬರು. "ಸ್ವ್ಯಾಬ್" ತನ್ನ 35ನೇ ವರ್ಷದ ಸಂಭ್ರಮದಲ್ಲಿ ಇರುವ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದು ಅಗತ್ಯವಾಗಿದೆ.

"ಸ್ವ್ಯಾಬ್" ವಿವಿಧ ಪದಾಧಿಕಾರಿ ಸ್ಥಾನಗಳಲ್ಲಿ ಇದ್ದು ಅವರು ಈ ನಮ್ಮ ಕ್ರೀಡಾ ಬರಹಗಾರರ ಸಂಘದ ಬೆಳವಣಿಗೆಗೆ ತಮ್ಮ ಶ್ರಮದ ಬೆವರು ನೀರನ್ನು ಎರೆದಿದ್ದಾರೆ. ಈ ಸಂಘದ ನೆನಪುಗಳ ಬುತ್ತಿಯನ್ನು ಬಿಚ್ಚಿದರೆ ಗೋಪಾಲ ಹೆಗಡೆ ಅವರು ಪಟ್ಟಿರುವ ಶ್ರಮ ಎಷ್ಟೊಂದು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

"ಸಹಕಾರ"-"ಅಸಹಕಾರ" ಏನೇ ಇರಲಿ; ತಾವು ಅಂದುಕೊಂಡದ್ದನ್ನು ಮಾಡಿ ತೋರಿಸುವ ಛಲವನ್ನು ತೋರಿದವರು ಗೋಪಾಲ ಹೆಗಡೆ. ಅವರ ನೇರ ಮಾತುಗಳ ಕೆಲವೊಮ್ಮೆ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗೆಂದು ಅವರೆಂದೂ ತಮ್ಮ ದಿಟ್ಟ ನುಡಿಯನ್ನು ಹಿಂದಕ್ಕೆ ತೆಗೆದುಕೊಂಡವರಲ್ಲ. ಅವರ ದಿಟ್ಟ ಮಾತುಗಳು ಸ್ವ್ಯಾಬ್ ಹಿತಕ್ಕಾಗಿ ಆಡಿದವಾಗಿರುತ್ತಿದ್ದವು. ಆದ್ದರಿಂದ ಅವರು ತಮ್ಮ ನಿರ್ಣಯಗಳಿಗೆ ಅಂಟಿಕೊಂಡು ಗಟ್ಟಿಯಾಗಿ ನಿಂತವರು.

ಎಂಬತ್ತು ಹಾಗೂ ತೊಂಬತ್ತರ ದಶಕದಲ್ಲಿ ಗೋಪಾಲ ಹೆಗಡೆ ಅವರು ಕ್ರೀಡಾ ಬರಹಗಾರರ ಸಂಘದ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ವೃತ್ತಿ ಚಟುವಟಿಕೆಗೆ ಒಂದಿಷ್ಟೂ ತೊಡಕಾಗದಂತೆಯೇ ಅವರು ಸ್ವ್ಯಾಬ್ ಚಟುವಟಿಕೆಗಳಿಗೂ ಸಮಯವನ್ನು ವಿನಿಯೋಗಿಸಿದವರು.

ಆದ್ದರಿಂದಲೇ ನಾನಿಲ್ಲಿ ಒಬ್ಬ ಹಿರಿಯ ಕ್ರೀಡಾ ಪತ್ರಕರ್ತರು ಗೋಪಾಲ ಹೆಗಡೆ ಅವರ ಬಗ್ಗೆ ಆಡಿದ ಮಾತನ್ನು ಸ್ಮರಿಸಲು ಇಷ್ಟಪಡುತ್ತೇನೆ. "ಗೋಪಾಲ ಅಂದರೆ ಅವನು ಯಾವುದೇ ಕೆಲಸದಲ್ಲಿ ದೈತ್ಯ. ಎಲ್ಲವನ್ನೂ ಮಾಡಿ ಮುಗಿಸುತ್ತಾನೆ. ತಾನು ಅಂದುಕೊಂಡಿದ್ದನ್ನು ಮುಗಿಸುವವರೆಗೆ ಅವನು ನಿಲ್ಲುವುದೇ ಇಲ್ಲ; ಆ ಕೆಲಸ ಮುಗಿಯುವವರೆಗೆ ಚಡಪಡಿಸುತ್ತಾನೆ. ಒಮ್ಮೆ ಆ ಕೆಲಸ ಮುಗಿದ ಮೇಲೆ ಮತ್ತೊಂದರ ಬೆನ್ನು ಹತ್ತುತ್ತಾನೆ" ಎಂದು ಆ ಹಿರಿಯ ಕ್ರೀಡಾ ಪತ್ರಕರ್ತರು ಹೇಳಿದ್ದರು.

ನಿಜವಾಗಿಯೂ ಈ ಮಾತು ಗೋಪಾಲ ಹೆಗಡೆ ಅವರ ಕಾರ್ಯದಕ್ಷತೆ ಹಾಗೂ ಕೆಲಸ ಮಾಡುವ ಉತ್ಸಾಹವನ್ನು ಬಿಂಬಿಸುತ್ತದೆ. ಸ್ವ್ಯಾಬ್ ಬಗ್ಗೆ ಈಗಲೂ ಕಳಕಳಿಯಿಂದ ಮಾತನಾಡುತ್ತಾರೆ ಹೆಗಡೆ ಅವರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಾಗಿ ಹೋದರೂ, ಅವರು ಸ್ವ್ಯಾಬ್ ಚಟುವಟಿಕೆಗಳ ಜೊತೆಗೆ ತಮ್ಮ ನಂಟು ಉಳಿಸಿಕೊಳ್ಳಲು ಸದಾ ಪ್ರಯತ್ನ ಮಾಡಿದ್ದಾರೆ. ಈಗಲೂ ಸ್ವ್ಯಾಬ್ ವಿಷಯವನ್ನು ಎತ್ತಿದರೆ ಹಲವಾರು ಇತಿಹಾಸದ ಪುಟಗಳನ್ನು ತೆರೆದಿಡುತ್ತಾರೆ.

ಸ್ವ್ಯಾಬ್ ಕ್ರೀಡಾ ಚಟುವಟಿಕೆ ಆಯೋಜಿಸಿದ್ದಾಗಲೆಲ್ಲ ಮುಂಚೂಣಿಯಲ್ಲಿ ಇರುತ್ತಿದ್ದವರೇ ಗೋಪಾಲ ಹೆಗಡೆ. ಅವರ ಉತ್ಸಾಹವು ನಮ್ಮಂಥ ಯುವಕರಿಗೆ ಮಾದರಿ ಆಗುವಂಥದು. ಹೆಗಡೆ ಅವರಲ್ಲಿನ ಒಂದು ಗುಣ ಮೆಚ್ಚುವಂಥದು; ಅದು ಅವರ ನೇರ ಮಾತು. ಮನದಲ್ಲಿ ಏನನ್ನು ಮರೆಮಾಡುವುದಿಲ್ಲ. ಅವರ ಈ ವ್ಯಕ್ತಿತ್ವ ಕೆಲವರಿಗೆ ಇಷ್ಟವಾಗಿರದೆಯೂ ಇರಬಹುದು. ಆದರೆ ಅಂಥದೊಂದು ಗುಣ ಎಲ್ಲರಲ್ಲಿಯೂ ಅಗತ್ಯ. ಒಂದು ಸಂಘಟನೆಯಲ್ಲಿ ಕೆಲಸ ಮಾಡುವಾಗ ಎಲ್ಲರನ್ನೂ ನೇರವಾಗಿ ಎದುರಿಸಿ, ಮಾತನಾಡಿ ದಿಟ್ಟತನ ತೋರುವುದು ಒಳ್ಳೆಯದು.

ಒಂದು ಒಳ್ಳೆಯ ಕೆಲಸ ಆಗಬೇಕು ಎಂದರೆ ಗೋಪಾಲ ಹೆಗಡೆ ಅವರಂತೆ ದಣಿಯದ ಉತ್ಸಾಹದಿಂದ ಹಾಗೂ ದಿಟ್ಟತನದಿಂದ ಕೆಲಸ ಮಾಡುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ. ಆಗಲೇ ಅನೇಕ ಸವಾಲುಗಳನ್ನು ಮೀರಿ ಒಳಿತಾಗುವ ಕೆಲಸವೊಂದನ್ನು ಮಾಡಲು ಸಾಧ್ಯವಾಗುತ್ತದೆ. ಅಂಥದೊಂದು ಸಾಧ್ಯತೆಯ ಮಾರ್ಗವನ್ನು ತೋರಿಸಿಕೊಟ್ಟವರು ಗೋಪಾಲ ಹೆಗಡೆ.

ತಮ್ಮ ಪ್ರಯೋಜನಕ್ಕೆ ಸ್ವ್ಯಾಬ್ ಅಲ್ಲ; ಸ್ವ್ಯಾಬ್ ಕೆಲಸಕ್ಕಾಗಿ ತಾವು ಎನ್ನುವಂಥ ಗುಣದೊಂದಿಗೆ ತಮ್ಮ ಬೆವರು ಹನಿಗಳ ಅಚ್ಚನ್ನು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಇತಿಹಾಸದ ಪುಟಗಳಲ್ಲಿ ಮೂಡಿಸಿದ್ದಾರೆ ಗೋಪಾಲ ಹೆಗಡೆ. 35ನೇ ವರ್ಷದ ಸಂಭ್ರಮದಲ್ಲಿರುವ "ಸ್ವ್ಯಾಬ್" ಇತಿಹಾಸದಲ್ಲಿ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸಿದ ಗೋಪಾಲ ಹೆಗಡೆ ಅವರಿಗೆ ಧನ್ಯವಾದಗಳು.

-ಡಿ.ಗರುಡ